ರಾಷ್ಟ್ರೀಯ ಸೇವಾ ಯೋಜನೆ ಧ್ವಜಾರೋಹಣ ವನ್ನು ಗುರೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಗುರೂರು ಗ್ರಾಮದ ಮುಖಂಡರಾದ ಶ್ರೀ ಮಲ್ಲೇಶ್ವರವರು ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ನಂಜನಗೂಡು ಪಾಲಿಟೆಕ್ನಿಕ್ನ ಎನ್ಎಸ್ಎಸ್ ಅಧಿಕಾರಿಗಳಾದ ಶ್ರೀ ರಾಜೇಶ್ ರವರು ಸಹ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ಯೋಗೇಶ್ವರಿ ಮತ್ತು ಶ್ರೀ ಮಹದೇವಸ್ವಾಮಿ ರವರು ಹಾಗೂ ಮೈಸೂರಿನ ಜೆಎಸ್ಎಸ್ ಪಾಲಿಟೆಕ್ನಿಕ್ ಕಾರ್ಯಕ್ರಮ ಅಧಿಕಾರಿಗಳಾದ ಚಂದ್ರಶೇಖರ ಮೂರ್ತಿ ಮತ್ತು ಸಹ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ಶ್ರುತಿ ಎಸ್ ರವರು ಉಪಸ್ಥಿತರಿದ್ದರು.
ದಿನಾಂಕ 24 ಫೆಬ್ರವರಿ 2024 ಎರಡನೇ ದಿನದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಗುರೂರು ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಈ ದಿನ ಧ್ವಜಾರೋಹಣದೊಂದಿಗೆ ಪ್ರಾರಂಭಿಸಲಾಯಿತು. ಧ್ವಜಾರೋಹಣವನ್ನು ಗ್ರಾಮದ ಮುಖಂಡರಾದ ಶ್ರೀ ಮಲ್ಲೇಶ ನೆರವೇರಿಸಿದರು. ನಂತರ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಜಾಥಾವನ್ನು ನಡೆಸಲಾಯಿತು, ಈ ಜಾತದ ಮುಖಾಂತರ ಮತದಾನದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು. ನಂತರ ಶ್ರಮದಾನ ಮಾಡಲಾಯಿತು ಸಂಜೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರು ಸಮಾಜ ಸೇವಕರಾದ ಶ್ರೀ ಪ್ರಸನ್ನ ರವರು ಆರೋಗ್ಯದ ಅರಿವು ಎಂಬ ವಿಷಯದ ಬಗ್ಗೆ ಎನ್ಎಸ್ಎಸ್ ಅಭ್ಯರ್ಥಿಗಳಿಗೆ ಆಹಾರ ಕ್ರಮ, ಜೀವನ ಶೈಲಿ, ಪರಿಸರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಏನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನವಾದ ಇಂದು ಉಚಿತ ಕಣ್ಣಿನ ಪರೀಕ್ಷೆ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದ ಜಾಗೃತಿಗಾಗಿ ಮನೆ ಮನೆಗೆ ತೆರಳಿ ಪಾಂಪ್ಲೆಟ್ ಹಂಚಲಾಯಿತು ಹಾಗು ಶ್ರಮದಾನಕ್ಕೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಸಂಜೆಯ ಉಪನ್ಯಾಸದ ಸನ್ಯಾಸಕರಾಗಿ ಪಡುಗೂರು ಜೆಎಸ್ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭವಾನಿ ಶಂಕರ್ ರವರು ವೈಜ್ಞಾನಿಕ ಬೆಳವಣಿಗೆ ಮತ್ತು ನಾವು ಎಂಬ ವಿಷಯದ ಬಗ್ಗೆ ಉಪನ್ಯಾಸ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂಜನಗೂಡು ವಿಜ್ಞಾನ ಮತ್ತು ಮಾನವಿಕ ವಿಭಾಗದ ಮುಖ್ಯಸ್ಥರಾದ ಶ್ರೀ ಜಿ ಪ್ರಭು ಪ್ರಸಾದ್ ರವರು ಬಂದಿದ್ದರು ಮುಖ್ಯ ಅತಿಥಿಗಳಾಗಿ ಮೈಸೂರು ಜೆಎಸ್ಎಸ್ ಪಾಲಿಟೆಕ್ನಿಕ್ ನ ಮಾನವಿಕ ಮತ್ತು ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಹೆಚ್ಎನ್ ಪಂಕಜ ರವರು ವಹಿಸಿದ್ದರು ಕಾರ್ಯಕ್ರಮ ದಲ್ಲಿ ನಂಜನಗೂಡು ಜೆಎಸ್ಎಸ್ ಪಾಲಿಟೆಕ್ನಿಕ್ನಾನಿಕ್ ಶಿಖರಾಗದ ಮುಖ್ಯಸ್ಥರಾದ ಶ್ರೀ ಅಶೋಕ್ ರವರು ಗ್ರಾಮದ ಮುಖಂಡರಾದ ಶ್ರೀ ಮಹದೇವಸ್ವಾಮಿ ರವರೇ ಮತ್ತು ನಂಜುಂಡಸ್ವಾಮಿಯವರು ಉಪಸ್ಥಿತರಿದ್ದರು

